ಡಾ. ಬದರೀನಾಥರ ಗಹನ ಕ್ರತಿಗೆ ವರ್ಷದ ಪುಸ್ತಕ ಪ್ರಶಸ್ತಿ

ಹೂವಿನ ಹಡಗಲಿ : ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ರಾಜ್ಯ ಘಟಕ ಹೂವಿನ ಹಡಗಲಿ ವತಿಯಿಂದ ದಿನಾಂಕ 18.09.2022 ರಂದು ಹೂವಿನ ಹಡಗಲಿಯ ರಂಗ ಭಾರತಿ ಸಭಾಂಗಣದಲ್ಲಿ ನಡೆದ ಕನ್ನಡ ನುಡಿ ವೈಭವ -2022 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಡಾ. ಬದರೀನಾಥ ಜಹಗೀರದಾರರ ಗಹನ ಕಥಾ ಸಂಕಲನಕ್ಕೆ 2021ನೇ ಸಾಲಿನ ವರ್ಷದ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಸುಮಾ ವಿಜಯ ಅಧ್ಯಕ್ಷರು ರಂಗಭಾರತಿ ನೆರವೇರಿಸಿ ಮಾತನಾಡಿ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ರಾಜ್ಯ ಘಟಕ ಸಾಹಿತಿಕ ಕಾರ್ಯಕ್ರಮಗಳನ್ನು ಹಿಂದಿನಿಂದಲೂ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬಂದಿದೆ. ಇಂದಿನ ದಿನಮಾನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪೋಷಿಸುವ ಅನಿವಾರ್ಯತೆಯಿದೆ. ನಾಡಿನ ಲೇಖಕರಿಂದ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿ ಸೂಕ್ತವಾದ ಕೃತಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಹೀಗೆ ನಾಡಿನಾದ್ಯಂತ ಪರಿಷತ್ತು ತನ್ನ ಕಾರ್ಯಕ್ರಮವನ್ನು ವಿಸ್ತರಿಸಿಕೊಂಡು ಸಾಗಲಿ ಎಂದು ಹಾರೈಸಿದರು. ಗಹನ ಕೃತಿಕಾರರಿಗೆ ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಖಂಡು ಬಂಜಾರ, ಉಪಾಧ್ಯಕ್ಷರು ಕರಾಬ ಸಂಘ ಅವರು ಗಹನ ಕಥಾ ಸಂಕಲನದ ಕುರಿತು ಮಾತನಾಡಿ ಮಾನವೀಯ ಮೌಲ್ಯಗಳ ಪ್ರತಿಷ್ಠಾಪನೆ ಉದ್ದೇಶ ಜೊತೆಗೆ ಉತ್ತಮ ಸಂಸ್ಕಾರಯುತ ಸಮಾಜದ ಸದುದ್ದೇಶದ ಕುರಿತು ಉಲ್ಲೇಖಿಸಿದರು. ಕೃತಿ ಹತ್ತು ಹಲವು ಸಾಮಾಜಿಕ ಸಂದೇಶವನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ ಎಂದರು. ನಾಡಿನ ತುಂಬ ಕನ್ನಡ ಸಂಘಟನೆಗಳು ನೆಲ ಜಲ ಭಾಷೆ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಕಲೆ,ಸಾಹಿತ್ಯ ತನ್ನದೇ ಆದ ವೈಶಿಷ್ಠತೆಯನ್ನು ಹೊಂದಿದೆ. ಇಂದು ಅಸಂಖ್ಯಾತ ಬರಹಗಾರರು ಪ್ರತಿ ವರ್ಷ ತಮ್ಮ ಬರವಣಿಗೆಯ ಮೂಲಕ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸಿ ಬೆಳೆಸುವ, ಸತ್ಕರಿಸುವ ಮುನ್ನಡೆಸುವ ಜವಾಬ್ದಾರಿಯನ್ನು ಕನ್ನಡ ಸಂಘ ಸಂಸ್ಥೆಗಳು ಮಾಡಿದರೆ ಕನ್ನಡದ ಕಂಪು ಪಸರಿಸಲು, ಸಾಹಿತ್ಯ ಕೃಷಿ ಹೆಚ್ಚಿಸಲು ನೇರವಾಗುತ್ತದೆ. ಸಾಧಕರನ್ನು ಗುರುತಿಸಿ ಗೌರವಿಸುವ ಜೊತೆಗೆ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಿ ಪ್ರಶಸ್ತಿ ನೀಡುತ್ತಿರುವುದು ಬರಹಗಾರರಿಗೆ ಹುಮ್ಮಸ್ಸು ತುಂಬಿದಂತಾಗುತ್ತಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶ್ರೀ ಬಿ. ಎಂ. ದೊಡ್ಡಬಸಯ್ಯ ಮಾತನಾಡಿ ಕಲೆ, ಸಾಹಿತ್ಯವನ್ನು ಸಂಭ್ರಮಿಸುವ, ಆಸ್ವಾದಿಸುವ ಇಂತಹ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಬಹಳಷ್ಟು ಪ್ರಯೋಜನಕಾರಿ ಜೊತೆಗೆ ಮನೋಲ್ಲಾಸವನ್ನು ನೀಡುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾಬ ಸಂಘದ ಶ್ರೀ ಬಾರಾವಲಿ ಕೆ. ಭಾವಿಹಳ್ಳಿ ವಹಿಸಿ ಮಾತನಾಡಿ ಇಂದು ಬರಹಗಾರರು ವಾಸ್ತವಿಕ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸಿ ಆ ಮೂಲಕ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ. ಮೌಲ್ಯಗಳ ಉಳಿವಿಗಾಗಿ ಸದಾ ಜಾಗೃತಗೊಳ್ಳುವ ಪ್ರಮೇಯವಿದೆ. ಸತ್ವಭರಿತ ಸಮಾಜಕ್ಕೆ ಮಾನವೀಯತೆಯ ಸಂದೇಶ ನೀಡುವ, ಸಮಾಜವನ್ನು ಒಗ್ಗೂಡಿಸುವ, ಮನಸ್ಸುಗಳನ್ನು ಬೆಸೆಯುವ ಕಾರ್ಯವನ್ನು ಸಾಹಿತ್ಯ ಮತ್ತು ಸಂಘಟನೆಗಳು ನಡೆಸಿಕೊಂಡು ಬರಬೇಕಿದೆ. ಇಂದಿನ ಈ ಕಾರ್ಯಕ್ರಮವನ್ನು ಮನಃ ಪೂರ್ವಕವಾಗಿ ಶ್ಲಾಘಿಸುತ್ತೇನೆ. ಸಾಹಿತಿಗಳು, ಸಂಘಟಕರು, ಸಾಹಿತ್ಯಾಭಿಮಾನಿಗಳನ್ನು ಒಗ್ಗೂಡಿಸಿದ ಈ ಕಾರ್ಯಕ್ರಮ ಸಮಾಜಕ್ಕೆ ಆದರ್ಶವಾಗಿದೆ ಎಂದರು.

 

 

ಕಾರ್ಯಕ್ರಮದಲ್ಲಿ ಶ್ರೀ ಇಸ್ಮಾಯಿಲ್ ಜಬೀರ್ ಅಜಿಮ್ ಪ್ರೇಮ್ ಜೀ, ಶ್ರೀ ಅಳ್ಳಿಕಟ್ಟಿ ಕೊಟ್ರೇಶ್ ಕ್ಷೇತ್ರ ಸಮನ್ವಯ ಅಧಿಕಾರಿಗಳು, ಡಾ.ಬಿ. ಶಿವಕುಮಾರ್, ಶ್ರೀ ಟಿ. ಪಿ. ವೀರೇಂದ್ರ, ಶ್ರೀ ಹನುಮಂತಪ್ಪ, ಶ್ರೀ ಕೆ. ಸಿ. ಪರಶುರಾಮ್, ಶ್ರೀ ಎಂ. ಪಿ. ಎಂ ಅಶೋಕ, ಶ್ರೀ ವಿ. ಬಿ. ಜಗದೀಶ್, ಶ್ರೀ ವಿರುಪಣ್ಣ ಡಿ, ಶ್ರೀ ಶಿವಕುಮಾರ್ ಗಡ್ಡಿ, ಶ್ರೀ ಕೆ. ಬಸವರಾಜ, ಶ್ರೀ ಬಿ. ಶಿವಲಿಂಗಪ್ಪ ಕರಾಬ ಸಂಘದ ಅಧ್ಯಕ್ಷರಾದ ಶ್ರೀ ಮಧುನಾಯ್ಕ್ ಲಂಬಾಣಿ, ಕಾರ್ಯದರ್ಶಿಗಳು, ಸದಸ್ಯರುಗಳು, ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡ ಸಂಘಟಕರು, ಕಲಾವಿದರು ಉಪಸ್ಥಿತರಿದ್ದರು.

ವರದಿ 
ಶಿವಯೋಗಿ ಎಂ.ವಿ 

Job Stack By Flawless Themes. Powered By WordPress